Posts

"ಮಲೆನಾಡ ಮಳೆಗಾಲ"

Image
ನಮಸ್ಕಾರ ಸ್ನೇಹಿತರೆ ನಿಮ್ಮ ಎಲ್.ಜಿ.(ಲೋ.ಗೋ.ನಾ.) ನನ್ನ ಮೊದಲ ಲೇಖನ ಮಲೆನಾಡ ಮದುವೆ ಓದಿ ಎಲ್ಲರೂ ಪ್ರಶಂಸಿದ್ದೀರಾ, ಇದೀಗ ಮಲೆನಾಡ ಮಳೆಗಾಲ ಎಂಬ ಇನ್ನೊಂದು ಲೇಖನ ಬರೆಯುತ್ತಿದ್ದೇನೆ,ಓದಿ ಹಾರೈಸಿ.. ಬಹಳ ದಿನಗಳಿಂದ ನಮ್ಮಲ್ಲಿನ ಮಳೆಗಾಲದ ಬಗ್ಗೆ ಬರೆಯಬೇಕೆಂದು ಇದ್ದೇ ಈ ದಿನ ಅದಕ್ಕೆ ಸಮಯ ಬಂದಿದೆ, ಮಲೆನಾಡು ಎಂದು ಕೇಳುವಾಗಲೆ ಅದೇನೋ ಖುಷಿ ಹೊರಗಿನ ಜನರಿಗಂತೂ ವಾವ್ ಎನ್ನುವಷ್ಟು ಖುಷಿ ಸುಂದರವಾದ ಗುಡ್ಡ ಬೆಟ್ಟಗಳು ಭೋರ್ಗರೆಯುವ ಜಲಪಾತಗಳು ಸುಂದರವಾದ ಪಕ್ಷಿಗಳು ಕಾಡು ಪ್ರಾಣಿಗಳು ಎಲ್ಲವೂ ನೆನಪಾಗುತ್ತದೆ.ಮಲೆನಾಡಿನ ಪ್ರಕೃತಿ ಇಷ್ಟೊಂದು ಸುಂದರವಾಗಿರಲು ಕಾರಣ ಇಲ್ಲಾಗುವ ಮಳೆ.  ಮಲೆನಾಡಿನಲ್ಲಿ ಮುಖ್ಯವಾಗಿ ಶಿರಸಿ ಸಿದ್ದಾಪುರ ಯಲ್ಲಾಪುರ ಸಾಗರ ಈ ಭಾಗಗಳಲ್ಲಿ ಮಳೆಗಾಲದ ಮಜಾನೇ ಬೇರೆ.. ಏಪ್ರಿಲ್ ಮೇ ನಲ್ಲಿ ಶುರುವಾಗುವ ಮುಂಗಾರು ಒಮ್ಮೊಮ್ಮೆ ಗುಡುಗು ಸಿಡಿಲಿನಿಂದ ಕುಡಿರುತ್ತದೆ ಆಲಿಕಲ್ಲುಗಳು ಬಿದ್ದರಂತು ಅದೊಂದು ರೀತಿಯ ಖುಷಿ.. ಇನ್ನು ಮಾವಿನಹಣ್ಣಿನ ಶೆಕರ್ಣಿ ಜೊತೆಗೆ ನೀರುದೊಸೆ ಇದ್ದರೆ ಸ್ವರ್ಗಕ್ಕೆ ಮೂರೇಗೇಣು,ಗಾಳಿ ಮಳೆಗೆ ಬೀಳುವ ಮಾವಿನಹಣ್ಣನ್ನು ಆಯ್ದುಕೊಳ್ಳಲು ನಾ ಮುಂದು ತಾ ಮುಂದು ಎಂದು ಜಿಗಿದು ಓಡುವ ಖುಷಿ ಮತ್ತೆಲ್ಲಿ ಸಿಕ್ಕಿಯಾತು?  ಜೂನ್ ಬಂತೆಂದರೆ ಶಾಲೆಗಳು ಪ್ರಾರಂಭ, ಹೊಸದಾದ ಪಾಠಿಚೀಲ (School Bag), ಮಳೆಗಾಲಕ್ಕಂತಲೇ ಬರುವ ಮಳೆಗಾಲದ ಚಪ್ಪಲಿ ಛತ್ರಿ ಎಲ

ಆ ಕರಾಳ ರಾತ್ರಿ

Image
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಆ ಒಂದು ಕರಾಳ ರಾತ್ರಿ ಬರದೇ ಇರುವುದಕ್ಕೆ ಸಾಧ್ಯನೇ ಇಲ್ಲ.. ಹಾಗಾದ್ರೆ ಸ್ನೇಹಿತ್ರೆ ಆ ಕರಾಳ ರಾತ್ರಿ ಯಾವ್ದು? ಅದೊಂದು ನೋವಿನ ರಾತ್ರಿ ಪ್ರಿಯಕರನಿಗೆ ಪ್ರಿಯತಮೆಯ ತಿರಸ್ಕಾರದ ರಾತ್ರಿ ಆದ್ರೆ ಪ್ರಿಯತಮೆಯೊಬ್ಬಳಿಗೆ ತನ್ನ ಪ್ರಿಯಕರ ದೂರ ಮಾಡಿದ ರಾತ್ರಿ ಆಗಿರಬಹುದು, ತಂದೆ-ತಾಯಿಗೆ ಮಗ ದಾರಿ ತಪ್ಪಿಬಿಟ್ಟ ಎಂಬ ನೋವಿನ ರಾತ್ರಿ ಆದರೆ ಮಗನಿಗೆ ಸಮಾಜದಿಂದಾದ ನೋವಿನ ರಾತ್ರಿಯು ಆಗಿರಬಹುದು, ಅಲ್ಲೊಬ್ಬ ವ್ಯಕ್ತಿಗೆ ಕೆಲಸದಲ್ಲಿ ಆದ ಅಪಮಾನದ ರಾತ್ರಿಯಾಗಿರಬಹುದು, ಇನ್ನೊಬ್ಬ ರೈತನಿಗೆ ವರ್ಷಗಟ್ಟಲೆ  ಕಷ್ಟ ಪಟ್ಟು ಬೆಳೆದ ಬೆಳೆಯೆಲ್ಲ ನಾಶವಾದಾಗ ಅನುಭವಿಸುವ ನೋವಿನ ರಾತ್ರಿ...  ಹಾಗಾದರೆ ಈ ಎಲ್ಲ ಸಮಸ್ಯೆಗಳು ರಾತ್ರೀನೇ ಬರುತ್ತವೆಯಾ? ನೋ ನೋ ಹಾಗೇನಿಲ್ಲ ಆದ್ರೆ ಇದೆಲ್ಲದರ ನೆನಪು ಕಾಡುವುದು ರಾತ್ರಿ ಹೊತ್ತಲ್ಲಿಯೇ.. ಎಂತಹ ವ್ಯಕ್ತಿಗೆ ಆದರೂ ತಾನು ಅನುಭವಿಸಿದ ನೋವು ಹತಾಶೆ ಅವಮಾನ ಇವೆಲ್ಲದರ ನೆನಪು ಮತ್ತೆ ಮತ್ತೆ ಕಾಡುವುದು ರಾತ್ರಿ ಹೊತ್ತಲ್ಲಿ.. ನಿದ್ರೆಯೇ ಬರದೇ ಹುಚ್ಚು ಹಿಡಿದಂತಾಗಿ ಏನಾದರೂ ಮಾಡಿಕೊಂಡು ಬಿಡೋಣ ಎನ್ನಿಸುವುದು ಸಹ ಆ ಕರಾಳ ರಾತ್ರಿ!! ಬಹಳಷ್ಟು ಜನ ಆತ್ಮಹತ್ಯೆಗೆ ಯತ್ನಿಸುವದು ಆ ಒಂದು ರಾತ್ರಿ ಆಗಿರತ್ತೆ.. ಬಹುಶಃ ಅನ್ನುವುದಕ್ಕಿಂತ ನಿಮ್ಮ ಜೀವನದಲ್ಲಿಯೂ ಅಂತಹ ಒಂದು ರಾತ್ರಿ ಬಂದಿರತ್ತೆ ಅಲ್ವೇ? ಅದರಲ್ಲಿಯೂ ಇಂದಿನ ಯುವಜನತೆ ಪ್ರೀತಿ ಪ್ರೇಮದಲ್ಲಿ ಸಿಲು

ಮಲೆನಾಡ ಮದುವೆ

Image
ಬೆಂಗಳೂರಿನಲ್ಲೋ ಅಥವಾ ಇನ್ನೆಲ್ಲೋ ದೊಡ್ಡ ಪಟ್ಟಣದಲ್ಲಿ ಕೆಲಸ ಮಾಡುತ್ತಿರುವ ಮಲೆನಾಡಿಗ ತನ್ನವರ ಮದುವೆಯ ಸಂದರ್ಭದಲ್ಲಿ ತನ್ನ ಮೇಲ್ವಿಚಾರಕರ ಬಳಿ ೫-೬ ದಿನ ರಜೆ ಕೇಳಲು ಹೋದರೆ, ಅವರು ಹೇಳುವ ಮಾತು ಏನ್ರಿ ನಿಮ್ಮ ಮದುವೆ ಆದ್ರೆ ನಾಲ್ಕೈದು ದಿನ ಓಕೆ ಆದ್ರೆ ನಿಮ್ಮ ಸಂಬಂಧಿಕರ ಮದುವೆಗೆ ಅದೇನು ಅಷ್ಟ್ ದಿನ ರಜೆ? ಕೊಡುವುದಕ್ಕೆ ಆಗಲ್ಲ ಬೇಕಿದ್ರೆ ಒಂದಿನ ಹೋಗ್ಬನ್ನಿ ಅಂದ್ಬಿಡ್ತಾರೆ... ಬಹುಶಃ ಈ ಅನುಭವ ಎಲ್ಲರಿಗೂ ಆಗಿರತ್ತೆ ಅಲ್ವಾ ಫ್ರೇಂಡ್ಸ್? ಅವರಿಗೇನು ತಿಳ್ದಿದೆ ನಮ್ಮ " ಮಲೆನಾಡಿನ ಮದುವೆಯ " ಸಂಭ್ರಮ, ಅದೆಷ್ಟೋ ಜನಕ್ಕೆ ಮಲೆನಾಡಿನ ಮದುವೆಯ ಸಂಭ್ರಮವೆನೆಂದು ತಿಳಿದಿಲ್ಲ.. ನಿಮ್ಮ ಸ್ನೇಹಜೀವಿ ಎಲ್.ಜಿ.ನಾಯ್ಕ್ರು (ಲೋ.ಗೋ.ನಾ) ಆದ ನಾನು, ಮಲೆನಾಡಿನ ಮದುವೆಯ ಬಗ್ಗೆ ಸಾಧ್ಯವಾದಷ್ಟು ಈ ಪುಟ್ಟ ಲೇಖನದ ಮೂಲಕ ತಿಳಿಸುತ್ತಾ ಇದೀನಿ. ಹುಡುಗ ಹುಡುಗಿಯ ನಿಶ್ಚಿತಾರ್ಥ (ಎಂಗೇಜ್ ಮೆಂಟ್, ಆಡು ಭಾಷೆಯಲ್ಲಿ ಸಿಹಿ ಊಟ ಎಂದು ಕರೆಯುತ್ತಾರೆ) ಆಗುತ್ತಿದ್ದಂತೆ ಮಲೆನಾಡಿಗರ ಮದುವೆಯ ಸಂಭ್ರಮ ಅಲ್ಲಿಂದಲೇ ಶುರು.. ಸಂಭ್ರಮದ ಜೊತೆ ಹೆಣ್ಣು ಹೆತ್ತವರಿಗೆ ಹೇಳಿಕೊಳ್ಳಲಾಗದ ನೋವಿರತ್ತೆ, ಹೆಣ್ಣಿಗೆ ತವರನ್ನು ಬಿಟ್ಟು ಹೋಗಬೇಕು ಎಂಬ ನೋವಾದರೆ ಹೆತ್ತಮ್ಮನಿಗೆ ಮಗಳು ಮನೆ ಬಿಟ್ಟು ಹೋಗುವ ನೋವೊಂದಾದರೆ ಹೆತ್ತಪ್ಪನಿಗೆ ಮಗಳ ಮದುವೆಗೆ ಹಣ ಹೊಂದಿಸುವ ಪರಿಸ್ಥಿತಿಯನ್ನು ನೆನೆಸಿಕೊಂಡರೆ ಎಂಥವರ ಕಣ್ಣಾದರೂ ಒದ್ದೆಯಾಗಲಾರದೆ ಇರಲಾರದು ( ಹ